ಬೆಲಿಮ್ನೈಟಿಸ್
ಹಾಲಿಜೀವಿಸಿರುವ ಶೀರ್ಷಪಾದಿ (ಸೆಫಲೋಪಾಡ) ಪ್ರಾಣಿಗಳನ್ನು ಎರಡು ಕಿವಿರುಗಳುಳ್ಳ ಪ್ರಾಣಿಗಳು (ಡೈಬ್ರಾಂಕಿಯೋಟ) ಮತ್ತು ನಾಲ್ಕು ಕಿವಿರುಗಳುಳ್ಳ ಪ್ರಾಣಿಗಳು (ಟೆಟ್ರಬ್ರಾಂಕಿಯೋಟ) ಎಂಬುದಾಗಿ ವಿಭಾಗಿಸಿದೆ. ಎರಡು ಕಿವಿರುಗಳುಳ್ಳ ಪ್ರಾಣಿಗಳನ್ನು ಹತ್ತುಕಾಲುಗಳುಳ್ಳ ಮತ್ತು ಎಂಟುಕಾಲುಗಳುಳ್ಳ ಪ್ರಾಣಿಗಳು ಎಂಬುದಾಗಿ ಉಪವಿಭಾಗಿಸಿವೆ. ಸ್ಕ್ವಿಡ್ಸ್, ಕಟಲ್ ಫಿಷ್ ಮೊದಲಾದವು ಎರಡು ಕಿವಿರು ಮತ್ತು ಹತ್ತು ಕಾಲು ಇರುವ ಶಿರಪಾದಿ ಪ್ರಾಣಿಗಳು. ಬೆಲಿಮ್ನೈಟುಗಳು ಈ ವರ್ಗದ ನಾಮಾವಶೇಷ ಸಂತತಿಗೆ ಸೇರಿದ ಪ್ರಾಣಿಗಳು.

	ಎರಡು ಕಿವಿರು ಮತ್ತು ಹತ್ತುಕಾಲು ಇದ್ದ ಇವು ಟ್ರಯಾಸಿಕ್, ಜುರಾಸಿಕ್, ಕ್ರಿಟೇಷಿಯಸ್ ಮತ್ತು ಇಯೊಸೀನ್ ಯುಗಗಳಲ್ಲಿ ಹೇರಳವಾಗಿದ್ದುವು. ಇವುಗಳ ಅವಶೇಷಗಳು ಜೇಡುನಿಕ್ಷೇಪಗಳಲ್ಲಿ ಹೆಚ್ಚಾಗಿ ಸಿಕ್ಕುತ್ತವೆ. ತಿರುಚ್ಚಿರಪಲ್ಲಿ ಕ್ರಿಟೇಷಿಯಸ್ ಶಿಲಾಸ್ತೋಮದ ಉತತ್ತೂರು ಶ್ರೇಣಿಗಳಲ್ಲಿ ಇವುಗಳ ಅವಶೇಷಗಳು ಹೇರಳವಾಗಿವೆ. ಸಿಂಧ್ ಪ್ರಾಂತದ ಇಯೊಸೀನ್ ಶಿಲೆಗಳಲ್ಲಿ ಬೆಲೆಮ್ನೈಟ್ ಮತ್ತು ಕಟಲ್ ಫಿಷ್‍ಗಳ ಮಧ್ಯಾಂತರ ಪ್ರಾಣಿಯಾದ ಬೆಲೊಸಿಫಿಯಾದ ಅವಶೇಷಗಳು ಸಿಕ್ಕಿವೆ.       		
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ